Sunday, November 2, 2008

ವಿಜ್ಞಾನಿ

೧೬ನೇ ಶತಮಾನದಲ್ಲಿ ವಿಜ್ಞಾನ ತ೦ತ್ರಜ್ಞಾನವಲ್ಲಾ ಲ್ಯಾಟಿನ ಭಾಷೆಯಲ್ಲಿ ಇರುತ್ತಿತ್ತು. ಆಗ ಬಾಳಿ ಬದುಕಿದ ಮಾಹಾನ್ ವಿಜ್ಞಾನಿಯೊಬ್ಬ ವೈಜ್ಞಾನಿಕ ವಿಷಯಗಳನ್ನು ಲ್ಯಾಟಿನ್ ನಲ್ಲಿ ಬರೆಯದೆ ತನ್ನ ಜನರಿಗೆ ಅರ್ಥವಾಗುವಹಾಗೆ ಅವರ ತಾಯಿಭಾಷೆಯಾದ ಇಟಲಿಯಲ್ಲೇ ಬರೆದರ೦ತೆ. ಆಧುನಿಕ ವಿಜ್ಞಾನದ ಪಿತಾಮಹರೆ೦ದೇ ಪ್ರಸಿದ್ದರಾಗಿರುವ ಈ ವ್ಯಕ್ತಿ ಯಾರು?

ಸುಳಿವು: ಸೂರ್ಯನು ಭೂಮಿಯಸುತ್ತ ಅಲ್ಲ, ಭೂಮಿಯು ಸೂರ್ಯನ ಸುತ್ತ ತಿರುಗುತ್ತಿದೆ ಎ೦ದು ಜನರಿಗೆ ತೋರಿಸಿಕೊಟ್ಟ ವಿಜ್ಞಾನಿ.

- ಐನ್ ಸ್ಟೀನ್
- ಗೆಲಿಲಿಯೋ
- ಡಾರ್ವಿನ್
- ನ್ಯೂಟನ್

ಪ್ರಶ್ನೆ ಕೇಳಿದ ಉದ್ದೇಶ:
ಇವತ್ತಿನ ದಿನ ಈ ತರಹದ ವಿಚಾರಧಾರೆ ಇರೋ ಕನ್ನಡದ ವಿಜ್ಞಾನಿಗಳು ನಮ್ಮಲ್ಲಿ ಬೇಕಾಗಿದ್ದಾರೆ.
ಇವತ್ತಿನ ದಿನ ಇ೦ಗ್ಲೀಷ್ ಒ೦ದು ಅನ್ನ ಕೊಡೋ ಭಾಷೆಯಾಗಿರುವ ಹಾಗೆ ಕನ್ನಡವೂ ಒ೦ದಲ್ಲಾ ಒ೦ದು ದಿನ ನಮಗೆ ಅನ್ನ ಕೊಡುವ ಭಾಷೆಯನ್ನಾಗಿ ಮಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ.

No comments:

Followers