Sunday, December 28, 2008

ನಾಡಿನ ವೀರ ವನಿತೆಯರು - ಗ೦ಡುಮೆಟ್ಟಿದ ನೆಲ ಕರ್ನಾಟಕ.

೧೮೫೭ ರಲ್ಲಿ ನಡೆದ ಸಿಪಾಯ್ ಮ್ಯುಟಿನಿ ಗಿ೦ತ ೩೩ ವರ್ಷಗಳ ಹಿ೦ದೆಯೇ (೧೮೨೪) ಕಿತ್ತೂರಿನ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದಳು? ಈಕೆಯ ಸಮಾಧಿ ಇರುವ ಜಾಗ ಯಾವುದು?
> ಕಾಕತಿ
> ಚಿಕ್ಕೋಡಿ
> ಹುಕ್ಕೇರಿ
> ಕಿತ್ತೂರು
ಉತ್ತರ> ಕಾಕತಿ.
ಚೆನ್ನಮ್ಮ, ಅಬ್ಬಕ್ಕ ರಾಣಿ, ಕೆಲದಿ ಚೆನ್ನಮ್ಮ ಮತ್ತು ಒನಕೆ ಓಬವ್ವ ನ೦ತ ವೀರ ವನಿತೆಯರು ಹುಟ್ತಿದ ಗ೦ಡುಭೂಮಿ ಕರ್ನಾಟಕ
ತನ್ನ ಒಬ್ಬನೇ ಮಗನ್ನು ಕಾಲವಷವಾದನ೦ತ್ರ ರಾಜ್ಯಕ್ಕೆ ಅಧಿಪತಿಯಾಗಿ ಶಿವಲಿ೦ಗಪ್ಪನನ್ನು ದತ್ತು ತೆಗೆದುಕೊ೦ಡಿದ್ದಳು, ಇದನ್ನು ವಿರೋಧಿಸಿ ಬ್ರಿಟಿಷರು Doctrine of Lapse ಕಾನೂನನ್ನು ಹೇರಿದರು. ಈ ಅನ್ಯಾಯದ ವಿರುದ್ಧ, ಬ್ರಿಟಿಷರ ವಿರುದ್ಧ ಹೋರಾಡಿ ಮಡಿದಳು.
ಚೆನ್ನಮ್ಮನ ಧೈರ್ಯ ಸಾಹಸಗಳನ್ನು ಇ೦ದಿಗೂ ಜನ ನೆನೆಯುತ್ತಾರೆ. ಕಿತ್ತೂರಿನ ಸೈನ್ಯದಲ್ಲಿದ್ದ ಸೇನಾಧಿಪತಿ ಸ೦ಗೊಳ್ಳಿ ರಾಯಣ್ಣನು ಕಿತ್ತೂರಿನ ಯುದ್ಧದ ಸೋಲಿನ ನ೦ತರ, ಬ್ರಿಟಿಷರ ವಿರುದ್ಧ ಗೊರಿಲ್ಲಾ ಯುದ್ಧವನ್ನು ಮು೦ದುವರೆಸಿ ಸಾಕಷ್ಟು ಹಾನಿಯು೦ಟುಮಾಡಿದ್ದ. The Father of Gurilla Warfare ಎ೦ಬ ಖ್ಯಾತಿಗೂ ಹೆಸರಾಗಿದ್ದವನು ಸ೦ಗೊಳ್ಳಿ ರಾಯಣ್ಣ.

No comments:

Followers