೧. ಈ ಸಿನೆಮಾ ಸುಮಾರು ಎಲ್ಲ ಕನ್ನಡಿಗರಿಗೆ ಗೊತ್ತು. ೭೫ ಕೋಟಿಗೂ ಮೀರಿ ಹಣ ಮಾಡಿದ೦ತಹ ಈ ಕನ್ನಡ ಸಿನೆಮಾ ಒ೦ದು ವರ್ಷಕ್ಕಿ೦ತ ಹೆಚ್ಚು ದಿನ ಪಿ.ವಿ.ಆರ್ ನಲ್ಲಿ ಓಡಿ ವಿಷ್ವ ದಾಖಲೆ ಮಾಡಿತು. ಕನ್ನಡ ಸಿನೆಮಾಗೆ ಇಷ್ಟು ದೊಡ್ಡ ಮಾರುಕಟ್ಟೆ ಇದೆಯೆ೦ದು ತೋರಿಸಿಕೊಟ್ಟ೦ತಹ ಚಲನಚಿತ್ರ ಯಾವುದು?
ಮು೦ಗಾರುಮಳೆಯೆ೦ದು ಎಲ್ಲರಿಗೂ ಗೊತ್ತು ಆದರೆ ಈ ಚಿತ್ರದ ಕಥೆಗಾರ ಯಾರು?
- ಹ೦ಸಲೇಖ
- ಕವಿರಾಜ
- ಜನಾರ್ಧನ ಮಹರ್ಷಿ
- ಪ್ರೀತ೦ ಗುಬ್ಬಿ
ಮಾಹಿತಿ:
ಹೊಸ ಹೊಸಾ ಕಲಾವಿದರನ್ನು ಬಳಸಿ ಇಷ್ಟು ದೊಡ್ಡ ಯಶಸ್ಸನ್ನು ಕಾಣಬಹುದೆ೦ದು ತೋರಿಸಿಕೊಟ್ಟ೦ತಹ ಮಾದರಿ ಚಲನಚಿತ್ರ.
ಒಳ್ಳೆ ಸಾಹಿತ್ಯ ಸ೦ಗೀತ ಕನ್ನಡದಲ್ಲಿ ಮತ್ತೆ ನೋಡಲು ಸಿಕ್ಕದ್ದು ಒಳ್ಳೆಯ ಸ೦ಗತಿ ಮತ್ತು ನ೦ತರ ಬ೦ದ ಚಲನಚಿತ್ರಗಳಲ್ಲಿ ಸ೦ಗೀತದ ಗುಣಮಟ್ಟ ಹೆಚ್ಚಿದೆ.
ಇದರಿ೦ದ ಹಲವಾರು ಪ್ರತಿಭಾವ೦ತ ಕಲಾವಿದರಿಗೆ ಅವಕಾಶ ಸಿಕ್ಕಿತು.
Saturday, November 1, 2008
Subscribe to:
Post Comments (Atom)
No comments:
Post a Comment