ನಮ್ಮ ನಾಡು ನಿಜವಾಗಿಯೂ ಚಿನ್ನದ ಬೀಡು. ೫ ರಾಷ್ಟ್ರೀಯ ಉದ್ಯಾನವನಗಳು, ೨೦ಕ್ಕೂ ಹೆಚ್ಚು ಅಭಯಾರಣ್ಯಗಳು ಮತ್ತು ನಮ್ಮಲ್ಲಿ ಹಲವಾರು ನದಿಗಳು ಇವೆ. ಅವುಗಳಲ್ಲಿ ಒ೦ದು ನದಿ ಬೆಳಗಾವಿಯಲ್ಲಿ ಹುಟ್ಟಿ, ಕೂಡಲ ಸ೦ಗಮದಲ್ಲಿ ಕ್ರುಷ್ಣಾ ನದಿಯಲ್ಲಿ ವಿಲೀನವಾಗುತ್ತದೆ. ಈ ನದಿ ಯಾವುದು?
> ಘಟಪ್ರಭಾ
> ಮಲಪ್ರಭಾ
> ಭೀಮಾ
> ತು೦ಗಭದ್ರಾ
ಉತ್ತರ> ಮಲಪ್ರಭಾ
ಈ ನದಿಯ ದ೦ಡೆಯಮೇಲೆ ನಮಗೆ ಐಹೊಳೆ, ಬಾದಾಯ ದೇವಾಲಯಗಳು ಸಿಗುತ್ತವೆ. ಬಾದಾಮಿ ಚಾಲುಕ್ಯರು ಇದೇ ನೀರು ಕುಡಿದು ಉತ್ತರದ ನರ್ಮದಾ ನದಿಯವರೆಗೂ ರಾಜ್ಯವನ್ನು ಹಬ್ಬಿಸಿದ್ದು.
ಕರ್ನಾಟಕದ ವನ್ಯ ಸ೦ಪತ್ತು, ಇಲ್ಲಿನ ನದಿಗಳು, ಇಲ್ಲಿನ ಹವಾಮಾನ, ಇಲ್ಲಿನ ವಿಶಿಷ್ಟ ಬೆಳೆಗಳು ಎಲ್ಲಾನೂ ಬರೀ ನಮಗೆ ನೋಡಕ್ಕೆ ಚಿ೦ದ, ಮನಸ್ಸಿಗೆ ಆನ೦ದ ತರೋಸ೦ಗತಿ ಅಷ್ಟೇ ಅಲ್ಲ. ಏಕ೦ದರೆ:
ಇಲ್ಲಿ ಸಹಜವಾಗಿಯೇ ಬೆಳೆಯುವ ವಿಶಿಷ್ತ ಬೆಳೆಗಳಿಗೆ ಭೌಗೋಳಿಕ ಮಾನ್ಯತೆ ಸಿಗುತ್ತದೆ - ಭಾರತದ WTO ಜೊತೆಗಿನ ೨೦೦೩ ರ ಒಪ್ಪ೦ದದ ಪ್ರಕಾರ: ಮೈಸೂರಿನ ವೀಳ್ಯದೆಲೆ, ಕೊಡಗಿನ ಕಿತ್ತಳೆ, ನಂಜನಗೂಡು ರಸಬಾಳೆ, ಮೂರು ಬಗೆಯ ಮಲ್ಲಿಗೆ ಹೂಗಳು ಇ೦ತಹ ಬೆಳೆಗಳಿಗೆ ಭೌಗೋಳಿಕ ಮಾನ್ಯತೆ ದೊರಕುತ್ತದೆ.
Benefits: Legal Protection
Huge economic prosperity for producers in that geographical area
ಒಂದು ನೆಲದ ಮಣ್ಣಿನ ಮತ್ತು ಅಲ್ಲಿನ ಹವಾಮಾನದ ವೈಶಿಷ್ಟ್ಯತೆ ಆಧರಿಸಿ ಅಲ್ಲಿ ಬೆಳೆಯೋ ಕೆಲವು ಬೆಳೆಗಳ ರೂಪ, ಗುಣಮಟ್ಟ ಹಾಗೂ ಅವುಗಳ ಸೊಗಡು ಇನ್ನೆಲ್ಲಿ ಬೆಳೆದ್ರೂ ಸಿಗದು ಅಂತಾದಾಗ ಇಂತಹ ಬೆಳೆಗಳ ವೈಶಿಷ್ಟ್ಯತೆ ಕಾಪಾಡಿ ಅವುಗಳನ್ನು ಬೆಳೆಯುವವರಿಗೆ ಪ್ರೋತ್ಸಾಹ ನೀಡಿ ಆ ಬೆಳೆಗೆ ಹೆಚ್ಚು ಮಾರುಕಟ್ಟೆ ಸಿಗೋ ಹಾಗೆ ಈ ಭೌಗೋಳಿಕ ಮಾನ್ಯತೆ ಮಾಡತ್ತೆ.
ಕರ್ನಾಟಕದ ಇನ್ನೂ ೯ ಬೆಳೆಗಳಿಗೆ ಭೌಗೋಳಿಕ ಮಾನ್ಯತೆ ಸಿಗೋದ್ರಲ್ಲಿ ಇದೆ ಅ೦ತ ಇತ್ತೀಚೆಗೆ ವಿಜಯ ಕರ್ನಾಟಕದಲ್ಲಿ ವರದಿಯಾಗಿತ್ತು.
Sunday, December 28, 2008
Subscribe to:
Post Comments (Atom)
No comments:
Post a Comment