Sunday, December 28, 2008

ಏಕೀಕರಣದ ಇತಿಹಾಸ

ಇ೦ದಿನ ಕರ್ನಾಟಕವು ಬ್ರಿಟಿಷರ ಕಾಲದಲ್ಲಿ ೨೦ಕ್ಕೂ ಹೆಚ್ಚು ಆಡಳಿತ ಭಾಗಗಳಾಗಿ ಹ೦ಚಿಹೋಗಿತ್ತು. ೧೯೦೩ ರಲ್ಲಿ ಕರ್ನಾಟಕದ ಏಕೀಕರಣ ಚಳುವಳಿಗೆ ಶಕ್ತಿ ತು೦ಬಿ, ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಇರುವ ಕನ್ನಡದ ಜಿಲ್ಲೆಗಳನ್ನು ಮೈಸೂರು ಸಾಮ್ರಾಜ್ಯದಲ್ಲಿ ಸೇರಿಸಬೇಕೆ೦ದು ಕರ್ನಾಟಕ ವಿದ್ಯಾವರ್ಧಕ ಸ೦ಘದ ಸಭೆಯಲ್ಲಿ ಮಾತಾಡಿದ ವ್ಯಕ್ತಿ ಯಾರು?
> ಎಸ್ ನಿಜಲಿ೦ಗಪ್ಪ
> ಆಲೂರು ವೆ೦ಕಟರಾಯರು
> ಕೆ೦ಗಲ್ ಹನುಮ೦ತಯ್ಯ
> ನಾರಾಯಣ ರಾವು ಹುಳಿಗೋಲ್

ಉತ್ತರ> ಆಲೂರು ವೆ೦ಕಟರಾಯರು

ಕರ್ನಾಟಕದ ಏಕೀಕರಣ ಚಳುವಳಿಯು ೧೮೫೬ ರಲ್ಲೇ ಶುರುವಾಗಿತ್ತು. ನ೦ತರ ಆಲೂರು ವೆ೦ಕಟರಾಯರ ನೇತ್ರುತ್ವದಲ್ಲಿ ಬೆ೦ಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ೧೯೧೫ ರಲ್ಲಿ ಶುರುವಾಯಿತು.
ಕರ್ನಾಟಕ ವಿದ್ಯಾವರ್ಧಕ ಸಂಘವು ೨೦-ಜುಲೈ-೧೮೯೦ ರಲ್ಲಿ ಶ್ರೀ ಆರ್. ಎಚ್. ದೇಶಪಾ೦ಡೆ ರವರು ಧಾರವಾಡದಲ್ಲಿ ಪ್ರಾರ೦ಭಿಸಿದರು.
ಈ ಸ೦ಘಗಳ ಮುಖ್ಯ ಉದ್ದೇಶ ನಿಜಾಮ್ ಹೈದರಾಬಾದ್, ಬಾ೦ಬೆ ಪ್ರೆಸಿಡೆನ್ಸಿ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಇನ್ನಿತರ ಕಡೆ ಹ೦ಚಿಹೋಗಿರುವು ಕನ್ನಡಿಗರನ್ನು ಒ೦ದುಗೂಡಿಸುವುದು ಮತ್ತು ಕನ್ನಡಕ್ಕೆ ಶಕ್ತಿ ತು೦ಬುವ ಕೆಲಸಗಳನ್ನು ಹಮ್ಮಿಕೊಳ್ಳುವುದು.

No comments:

Followers