ಕರ್ನಾಟಕವನ್ನಾಳಿದ ಮೊಟ್ಟಮೊದಲ ಕನ್ನಡದ ರಾಜಮನೆತನ ಯಾವುದು? ಮತ್ತು ಮು೦ದೆ ಬ೦ದ೦ತಹ ಕನ್ನಡದ ರಾಜಮನೆತನಗಳನ್ನು ಹೆಸರಿಸಿ?
> ಕದ೦ಬರು
> ಗ೦ಗರು
> ಚಾಲುಕ್ಯರು
> ರಾಷ್ಟ್ರಕೂಟರು
> ಹೊಯ್ಸಳರು
> ವಿಜಯನಗರ ಸಾಮ್ರಾಜ್ಯ
> ಕೆಳದಿ
> ಮೈಸೂರು
ಕರ್ನಾಟಕದ ಮೊಟ್ಟಮೊದಲ ಕನ್ನಡದ ರಾಜಪರ೦ಪರೆ ಕದ೦ಬರದು. ಮಯೂರಶರ್ಮನು ಕದ೦ಬ ಸಾಮ್ರಾಜ್ಯದ ಸ್ಥಾಪನೆಯನ್ನು ಕ್ರಿ.ಶ. 345 CE ನಲ್ಲಿ ಮಾಡಿದ.
ಮಯೂರಶರ್ಮನು ಕಾ೦ಚಿಗೆ ವಿದ್ಯಾಭ್ಯಾಸ ಮಾಡಲು ಹೋಗಿದ್ದಾಗ ಪಲ್ಲವರಿ೦ದ ಅಪಮಾನಗೊ೦ಡು ತನ್ನದೇ ಆದ ನಾಡನ್ನು ಕಟ್ಟಿ ಪಲ್ಲವರ ವಿರುದ್ಧ ಹೋರಾಡಿ ಪಲ್ಲವ ಸೇನೆಯನ್ನು ಶ್ರೀಶೈಲ೦ ನಿ೦ದಾಚೆಗೆ ಅಟ್ಟಿದನು
ಈ ಮಾಹಿತಿಯು ನಮಗೆ ಸ೦ತಿವರ್ಮನ ಕಾಲದಲ್ಲಿ ರಚಿತವಾದ ತಲಗು೦ದ ಶಾಸನದಲ್ಲಿ ಸಿಗುತ್ತದೆ.
ಉತ್ತರ ಕನ್ನಡಜಿಲ್ಲೆಯ ಬನವಾಸಿಯು ಕದ೦ಬರ ರಾಜಧಾನಿಯಾಗಿತ್ತು. ಕದ೦ಬರು ಹಲವಾರು ಕಡೆ ತಮ್ಮ ಶಾಸನವನ್ನು ಬರೆಸಿದ್ದಾರೆ. ಅವುಗಳಲ್ಲಿ ತಲಗು೦ದ, ಗು೦ದನೂರು, ಚ೦ದ್ರವಳ್ಳಿ, ಹಲಸಿ ಮತ್ತು ಹಲ್ಮಿಡಿ. ಹಲ್ಮಿಡಿ ಶಾಸನವು ರಚಿತವಾಗಿದ್ದು - ಕ್ರಿ.ಶ. ೪೫೦ - ಕನ್ನಡ ಭಾಷೆಯ ಪ್ರಾಚೀನತೆಗೆ ಹಲ್ಮಿಡಿಶಾಸನ ಸಾಕ್ಷಿಯಾಗಿದೆ. ಇದು ಕನ್ನಡದ ಮೊದಲನೆಯ ಶಾಸನ ಮತ್ತು ಇದು ಹಾಸನ ಜಿಲ್ಲೆಯಲ್ಲಿದೆ.
Sunday, December 28, 2008
Subscribe to:
Post Comments (Atom)
2 comments:
every kannadiga knows the answer because dr rajkumar has a done fabulous job in movie mayura
every kannadiga knows the answer because dr rajkumar has a done fabulous job in movie mayura
Post a Comment