Sunday, December 28, 2008

ನಮ್ಮ ಮೊದಲ ರಾಷ್ಟ್ರಕವಿ

"ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮವು" ಎ೦ದು ಹಾಡಿದ ಕರ್ನಾಟಕದ ಮೊಟ್ಟಮೊದಲ ರಾಷ್ಟ್ರಕವಿ ಯಾರು?

> ಕುವೆ೦ಪು
> ಬೇ೦ದ್ರೆ
> ಮಾಸ್ತಿ
> ಗೋವಿ೦ದ ಪೈ
ಉತ್ತರ > ಗೋವಿ೦ದ ಪೈ

೧೯೪೯ ರಲ್ಲ್ಲಿ ಇವರಿಗೆ ರಾಷ್ಟ್ರಕವಿ ಬಿರುದನ್ನು ಕೊಟ್ಟು ಸನ್ಮಾನಿಸಲಾಗಿತ್ತು. ಒಟ್ಟು ೧೭ ಭಾಷೆಗಳ ಮೇಲೆ ಹಿಡಿತ ಸಾಧಿಸಿದ್ದ ಕನ್ನಡದ ಕವಿ ಗೋವಿ೦ದ ಪೈ. ಗೋವಿಂದ ಪೈಗಳು ಕೊಂಕಣಿ, ತುಳು, ಕನ್ನಡ, ಸಂಸ್ಕೃತ, ಮಲಯಾಳಂ, ತೆಲುಗು, ತಮಿಳು, ಮರಾಠಿ, ಒರಿಯಾ, ಬಂಗಾಳಿ, ಪಾಲಿ, ಅರ್ಧಮಾಗಧಿ, ಉರ್ದು, ಪರ್ಷಿಯನ್, ಗ್ರೀಕ್, ಲ್ಯಾಟಿನ್ ಹಾಗು ಜಪಾನಿ ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದಿದ್ದರು

ಜಪಾನಿನ "ನೋ" ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಆದರೆ ಸಂಶೋಧನೆ ಗೋವಿಂದ ಪೈಗಳ ಬರೆವಣಿಗೆಯ ಅತಿ ಮುಖ್ಯ ಭಾಗ. ತುಳುನಾಡಿನ ಇತಿಹಾಸ, ಗೌಡ ಸಾರಸ್ವತರ ಮೂಲ, ಬಸವೇಶ್ವರ ವಂಶಾವಳಿ, ಹಾಗು ಕರ್ನಾಟಕದ ಪ್ರಾಚೀನ ರಾಜಮನೆತನಗಳು, ಭಾರತೀಯ ಇತಿಹಾಸ, ಜೈನ, ಬೌದ್ಧ ಹಾಗು ವೀರಶೈವ ಧರ್ಮಗಳ ಬಗೆಗೆ ಮೌಲಿಕ ಸಂಶೋಧನೆ ಮಾಡಿ, ಅನೇಕ ಲೇಖನಗಳನ್ನು ಬರೆದಿದ್ದಾರೆ
ಸಾಹಿತ್ಯ ಮತ್ತು ಜಾನಪದ ಕಲೆಯ ಮೇಲೆ ಸ೦ಶೋಧನೆ ಮಾಡಲು ಇವರದೊ೦ದು ಸ೦ಶೋಧನಾಲಯವು ಉಡುಪಿಯಲ್ಲಿದೆ.
ಕಾಸರಗೋಡಿನಲ್ಲಿರುವ ಮ೦ಜೇಶ್ವರದಲ್ಲಿ ಇರುವ ಇವರ ಮನೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಿದ್ದಾರೆ.
http://www.tulasivana.com/index.php?paged=3 ನಲ್ಲಿ ಹಾಡಿನ ಸಾಹಿತ್ಯ ಸಿಗುತ್ತದೆ ಮತ್ತು ಹಾಡನ್ನು ಕೇಳಲು ಇಲ್ಲಿ ಕ್ಲಿಕ್ಕಿಸಿ:
http://www.kannadaaudio.com/Songs/Patriotic/BaarisuKannadaDindimava/Thaayi.ram

No comments:

Followers