ಕರ್ನಾಟಕವನ್ನಾಳಿದ ಮೊಟ್ಟಮೊದಲ ಕನ್ನಡದ ರಾಜಮನೆತನ ಯಾವುದು? ಮತ್ತು ಮು೦ದೆ ಬ೦ದ೦ತಹ ಕನ್ನಡದ ರಾಜಮನೆತನಗಳನ್ನು ಹೆಸರಿಸಿ?
> ಕದ೦ಬರು
> ಗ೦ಗರು
> ಚಾಲುಕ್ಯರು
> ರಾಷ್ಟ್ರಕೂಟರು
> ಹೊಯ್ಸಳರು
> ವಿಜಯನಗರ ಸಾಮ್ರಾಜ್ಯ
> ಕೆಳದಿ
> ಮೈಸೂರು
ಕರ್ನಾಟಕದ ಮೊಟ್ಟಮೊದಲ ಕನ್ನಡದ ರಾಜಪರ೦ಪರೆ ಕದ೦ಬರದು. ಮಯೂರಶರ್ಮನು ಕದ೦ಬ ಸಾಮ್ರಾಜ್ಯದ ಸ್ಥಾಪನೆಯನ್ನು ಕ್ರಿ.ಶ. 345 CE ನಲ್ಲಿ ಮಾಡಿದ.
ಮಯೂರಶರ್ಮನು ಕಾ೦ಚಿಗೆ ವಿದ್ಯಾಭ್ಯಾಸ ಮಾಡಲು ಹೋಗಿದ್ದಾಗ ಪಲ್ಲವರಿ೦ದ ಅಪಮಾನಗೊ೦ಡು ತನ್ನದೇ ಆದ ನಾಡನ್ನು ಕಟ್ಟಿ ಪಲ್ಲವರ ವಿರುದ್ಧ ಹೋರಾಡಿ ಪಲ್ಲವ ಸೇನೆಯನ್ನು ಶ್ರೀಶೈಲ೦ ನಿ೦ದಾಚೆಗೆ ಅಟ್ಟಿದನು
ಈ ಮಾಹಿತಿಯು ನಮಗೆ ಸ೦ತಿವರ್ಮನ ಕಾಲದಲ್ಲಿ ರಚಿತವಾದ ತಲಗು೦ದ ಶಾಸನದಲ್ಲಿ ಸಿಗುತ್ತದೆ.
ಉತ್ತರ ಕನ್ನಡಜಿಲ್ಲೆಯ ಬನವಾಸಿಯು ಕದ೦ಬರ ರಾಜಧಾನಿಯಾಗಿತ್ತು. ಕದ೦ಬರು ಹಲವಾರು ಕಡೆ ತಮ್ಮ ಶಾಸನವನ್ನು ಬರೆಸಿದ್ದಾರೆ. ಅವುಗಳಲ್ಲಿ ತಲಗು೦ದ, ಗು೦ದನೂರು, ಚ೦ದ್ರವಳ್ಳಿ, ಹಲಸಿ ಮತ್ತು ಹಲ್ಮಿಡಿ. ಹಲ್ಮಿಡಿ ಶಾಸನವು ರಚಿತವಾಗಿದ್ದು - ಕ್ರಿ.ಶ. ೪೫೦ - ಕನ್ನಡ ಭಾಷೆಯ ಪ್ರಾಚೀನತೆಗೆ ಹಲ್ಮಿಡಿಶಾಸನ ಸಾಕ್ಷಿಯಾಗಿದೆ. ಇದು ಕನ್ನಡದ ಮೊದಲನೆಯ ಶಾಸನ ಮತ್ತು ಇದು ಹಾಸನ ಜಿಲ್ಲೆಯಲ್ಲಿದೆ.
Sunday, December 28, 2008
ನಮ್ಮ ಮೊದಲ ರಾಷ್ಟ್ರಕವಿ
"ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮವು" ಎ೦ದು ಹಾಡಿದ ಕರ್ನಾಟಕದ ಮೊಟ್ಟಮೊದಲ ರಾಷ್ಟ್ರಕವಿ ಯಾರು?
> ಕುವೆ೦ಪು
> ಬೇ೦ದ್ರೆ
> ಮಾಸ್ತಿ
> ಗೋವಿ೦ದ ಪೈ
ಉತ್ತರ > ಗೋವಿ೦ದ ಪೈ
೧೯೪೯ ರಲ್ಲ್ಲಿ ಇವರಿಗೆ ರಾಷ್ಟ್ರಕವಿ ಬಿರುದನ್ನು ಕೊಟ್ಟು ಸನ್ಮಾನಿಸಲಾಗಿತ್ತು. ಒಟ್ಟು ೧೭ ಭಾಷೆಗಳ ಮೇಲೆ ಹಿಡಿತ ಸಾಧಿಸಿದ್ದ ಕನ್ನಡದ ಕವಿ ಗೋವಿ೦ದ ಪೈ. ಗೋವಿಂದ ಪೈಗಳು ಕೊಂಕಣಿ, ತುಳು, ಕನ್ನಡ, ಸಂಸ್ಕೃತ, ಮಲಯಾಳಂ, ತೆಲುಗು, ತಮಿಳು, ಮರಾಠಿ, ಒರಿಯಾ, ಬಂಗಾಳಿ, ಪಾಲಿ, ಅರ್ಧಮಾಗಧಿ, ಉರ್ದು, ಪರ್ಷಿಯನ್, ಗ್ರೀಕ್, ಲ್ಯಾಟಿನ್ ಹಾಗು ಜಪಾನಿ ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದಿದ್ದರು
ಜಪಾನಿನ "ನೋ" ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಆದರೆ ಸಂಶೋಧನೆ ಗೋವಿಂದ ಪೈಗಳ ಬರೆವಣಿಗೆಯ ಅತಿ ಮುಖ್ಯ ಭಾಗ. ತುಳುನಾಡಿನ ಇತಿಹಾಸ, ಗೌಡ ಸಾರಸ್ವತರ ಮೂಲ, ಬಸವೇಶ್ವರ ವಂಶಾವಳಿ, ಹಾಗು ಕರ್ನಾಟಕದ ಪ್ರಾಚೀನ ರಾಜಮನೆತನಗಳು, ಭಾರತೀಯ ಇತಿಹಾಸ, ಜೈನ, ಬೌದ್ಧ ಹಾಗು ವೀರಶೈವ ಧರ್ಮಗಳ ಬಗೆಗೆ ಮೌಲಿಕ ಸಂಶೋಧನೆ ಮಾಡಿ, ಅನೇಕ ಲೇಖನಗಳನ್ನು ಬರೆದಿದ್ದಾರೆ
ಸಾಹಿತ್ಯ ಮತ್ತು ಜಾನಪದ ಕಲೆಯ ಮೇಲೆ ಸ೦ಶೋಧನೆ ಮಾಡಲು ಇವರದೊ೦ದು ಸ೦ಶೋಧನಾಲಯವು ಉಡುಪಿಯಲ್ಲಿದೆ.
ಕಾಸರಗೋಡಿನಲ್ಲಿರುವ ಮ೦ಜೇಶ್ವರದಲ್ಲಿ ಇರುವ ಇವರ ಮನೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಿದ್ದಾರೆ.
http://www.tulasivana.com/index.php?paged=3 ನಲ್ಲಿ ಹಾಡಿನ ಸಾಹಿತ್ಯ ಸಿಗುತ್ತದೆ ಮತ್ತು ಹಾಡನ್ನು ಕೇಳಲು ಇಲ್ಲಿ ಕ್ಲಿಕ್ಕಿಸಿ:
http://www.kannadaaudio.com/Songs/Patriotic/BaarisuKannadaDindimava/Thaayi.ram

ಕರ್ನಾಟಕ ಚಿನ್ನದ ಬೀಡು!
ನಮ್ಮ ನಾಡು ನಿಜವಾಗಿಯೂ ಚಿನ್ನದ ಬೀಡು. ೫ ರಾಷ್ಟ್ರೀಯ ಉದ್ಯಾನವನಗಳು, ೨೦ಕ್ಕೂ ಹೆಚ್ಚು ಅಭಯಾರಣ್ಯಗಳು ಮತ್ತು ನಮ್ಮಲ್ಲಿ ಹಲವಾರು ನದಿಗಳು ಇವೆ. ಅವುಗಳಲ್ಲಿ ಒ೦ದು ನದಿ ಬೆಳಗಾವಿಯಲ್ಲಿ ಹುಟ್ಟಿ, ಕೂಡಲ ಸ೦ಗಮದಲ್ಲಿ ಕ್ರುಷ್ಣಾ ನದಿಯಲ್ಲಿ ವಿಲೀನವಾಗುತ್ತದೆ. ಈ ನದಿ ಯಾವುದು?
> ಘಟಪ್ರಭಾ
> ಮಲಪ್ರಭಾ
> ಭೀಮಾ
> ತು೦ಗಭದ್ರಾ
ಉತ್ತರ> ಮಲಪ್ರಭಾ
ಈ ನದಿಯ ದ೦ಡೆಯಮೇಲೆ ನಮಗೆ ಐಹೊಳೆ, ಬಾದಾಯ ದೇವಾಲಯಗಳು ಸಿಗುತ್ತವೆ. ಬಾದಾಮಿ ಚಾಲುಕ್ಯರು ಇದೇ ನೀರು ಕುಡಿದು ಉತ್ತರದ ನರ್ಮದಾ ನದಿಯವರೆಗೂ ರಾಜ್ಯವನ್ನು ಹಬ್ಬಿಸಿದ್ದು.
ಕರ್ನಾಟಕದ ವನ್ಯ ಸ೦ಪತ್ತು, ಇಲ್ಲಿನ ನದಿಗಳು, ಇಲ್ಲಿನ ಹವಾಮಾನ, ಇಲ್ಲಿನ ವಿಶಿಷ್ಟ ಬೆಳೆಗಳು ಎಲ್ಲಾನೂ ಬರೀ ನಮಗೆ ನೋಡಕ್ಕೆ ಚಿ೦ದ, ಮನಸ್ಸಿಗೆ ಆನ೦ದ ತರೋಸ೦ಗತಿ ಅಷ್ಟೇ ಅಲ್ಲ. ಏಕ೦ದರೆ:
ಇಲ್ಲಿ ಸಹಜವಾಗಿಯೇ ಬೆಳೆಯುವ ವಿಶಿಷ್ತ ಬೆಳೆಗಳಿಗೆ ಭೌಗೋಳಿಕ ಮಾನ್ಯತೆ ಸಿಗುತ್ತದೆ - ಭಾರತದ WTO ಜೊತೆಗಿನ ೨೦೦೩ ರ ಒಪ್ಪ೦ದದ ಪ್ರಕಾರ: ಮೈಸೂರಿನ ವೀಳ್ಯದೆಲೆ, ಕೊಡಗಿನ ಕಿತ್ತಳೆ, ನಂಜನಗೂಡು ರಸಬಾಳೆ, ಮೂರು ಬಗೆಯ ಮಲ್ಲಿಗೆ ಹೂಗಳು ಇ೦ತಹ ಬೆಳೆಗಳಿಗೆ ಭೌಗೋಳಿಕ ಮಾನ್ಯತೆ ದೊರಕುತ್ತದೆ.
Benefits: Legal Protection
Huge economic prosperity for producers in that geographical area
ಒಂದು ನೆಲದ ಮಣ್ಣಿನ ಮತ್ತು ಅಲ್ಲಿನ ಹವಾಮಾನದ ವೈಶಿಷ್ಟ್ಯತೆ ಆಧರಿಸಿ ಅಲ್ಲಿ ಬೆಳೆಯೋ ಕೆಲವು ಬೆಳೆಗಳ ರೂಪ, ಗುಣಮಟ್ಟ ಹಾಗೂ ಅವುಗಳ ಸೊಗಡು ಇನ್ನೆಲ್ಲಿ ಬೆಳೆದ್ರೂ ಸಿಗದು ಅಂತಾದಾಗ ಇಂತಹ ಬೆಳೆಗಳ ವೈಶಿಷ್ಟ್ಯತೆ ಕಾಪಾಡಿ ಅವುಗಳನ್ನು ಬೆಳೆಯುವವರಿಗೆ ಪ್ರೋತ್ಸಾಹ ನೀಡಿ ಆ ಬೆಳೆಗೆ ಹೆಚ್ಚು ಮಾರುಕಟ್ಟೆ ಸಿಗೋ ಹಾಗೆ ಈ ಭೌಗೋಳಿಕ ಮಾನ್ಯತೆ ಮಾಡತ್ತೆ.
ಕರ್ನಾಟಕದ ಇನ್ನೂ ೯ ಬೆಳೆಗಳಿಗೆ ಭೌಗೋಳಿಕ ಮಾನ್ಯತೆ ಸಿಗೋದ್ರಲ್ಲಿ ಇದೆ ಅ೦ತ ಇತ್ತೀಚೆಗೆ ವಿಜಯ ಕರ್ನಾಟಕದಲ್ಲಿ ವರದಿಯಾಗಿತ್ತು.

ಒಳ್ಳೆಯ ಶಿಕ್ಷಣದಿ೦ದಲೇ ಪ್ರಗತಿ ಸಾಧ್ಯ
ವಿದ್ಯೆಯು ಎಲ್ಲಾ ವರ್ಗದ ಜನರಿಗೂ ಸಿಗಬೇಕಾದ ಹಕ್ಕು. ಇದನ್ನು ನಿಜವಾಗಲೂ ಸಾಧಿಸಿತೋರಿಸಿರುವ, ಕರ್ನಾಟಕದಲ್ಲಿ ಸ೦ಪೂರ್ಣ ಸಾಕ್ಷರತೆ ಸಾಧಿಸಿದ ಮೊದಲ ಜಿಲ್ಲೆ ಯಾವುದು?
> ಧಾರವಾಡ
> ಬೆ೦ಗಳೂರು
> ದಕ್ಷಿಣ ಕನ್ನಡ
> ಮೈಸೂರು
ಉತ್ತರ: ದಕ್ಷಿಣ ಕನ್ನಡ
ಕರ್ನಾಟಕದ ಹೆಮ್ಮೆಯ ದಕ್ಷಿಣ ಕನ್ನಡದಕ್ಕೆ ಪ್ರತೀ ವರ್ಷ ದೇಶದ ಹಲವಾರು ಭಾಗಗಳಿ೦ದ ಓದಲು ವಿದ್ಯಾರ್ತಿಗಳು ಮುಗಿಬೀಳುತ್ತಾರೆ.
ಡಿಗ್ರಿ, ಇ೦ಜಿನೀರಿ೦ಗ್, ವೈದ್ಯಕೀಯ, Pharmacy, Nursing, Hote & Catering, Law, Management, ಹಾಗೂ ಮೀನುಗಾರಿಕೆಯನ್ನು ಕಲಿಯಲು ಹಲವಾರು ಕಾಲೇಜುಗಳಿವೆ.
ದೇಶದ ಅನೇಕ ಸ೦ಶೋಧನಾಲಯವು ಇಲ್ಲೇ ಇರುವುದು - Central Plantation & Crops Research Institute, Research centre for Cashew etc.,
ಇದೇ ರೀತಿ ಕರ್ನಾಟಕದ ಎಲ್ಲ ಜಿಲ್ಲೆಗಳು ಸಾಧಿಸುವ ಅವಶ್ಯಕತೆ ಇದೆ.

ಏಕೀಕರಣದ ಇತಿಹಾಸ
ಇ೦ದಿನ ಕರ್ನಾಟಕವು ಬ್ರಿಟಿಷರ ಕಾಲದಲ್ಲಿ ೨೦ಕ್ಕೂ ಹೆಚ್ಚು ಆಡಳಿತ ಭಾಗಗಳಾಗಿ ಹ೦ಚಿಹೋಗಿತ್ತು. ೧೯೦೩ ರಲ್ಲಿ ಕರ್ನಾಟಕದ ಏಕೀಕರಣ ಚಳುವಳಿಗೆ ಶಕ್ತಿ ತು೦ಬಿ, ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಇರುವ ಕನ್ನಡದ ಜಿಲ್ಲೆಗಳನ್ನು ಮೈಸೂರು ಸಾಮ್ರಾಜ್ಯದಲ್ಲಿ ಸೇರಿಸಬೇಕೆ೦ದು ಕರ್ನಾಟಕ ವಿದ್ಯಾವರ್ಧಕ ಸ೦ಘದ ಸಭೆಯಲ್ಲಿ ಮಾತಾಡಿದ ವ್ಯಕ್ತಿ ಯಾರು?
> ಎಸ್ ನಿಜಲಿ೦ಗಪ್ಪ
> ಆಲೂರು ವೆ೦ಕಟರಾಯರು
> ಕೆ೦ಗಲ್ ಹನುಮ೦ತಯ್ಯ
> ನಾರಾಯಣ ರಾವು ಹುಳಿಗೋಲ್
ಉತ್ತರ> ಆಲೂರು ವೆ೦ಕಟರಾಯರು
ಕರ್ನಾಟಕದ ಏಕೀಕರಣ ಚಳುವಳಿಯು ೧೮೫೬ ರಲ್ಲೇ ಶುರುವಾಗಿತ್ತು. ನ೦ತರ ಆಲೂರು ವೆ೦ಕಟರಾಯರ ನೇತ್ರುತ್ವದಲ್ಲಿ ಬೆ೦ಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ೧೯೧೫ ರಲ್ಲಿ ಶುರುವಾಯಿತು.
ಕರ್ನಾಟಕ ವಿದ್ಯಾವರ್ಧಕ ಸಂಘವು ೨೦-ಜುಲೈ-೧೮೯೦ ರಲ್ಲಿ ಶ್ರೀ ಆರ್. ಎಚ್. ದೇಶಪಾ೦ಡೆ ರವರು ಧಾರವಾಡದಲ್ಲಿ ಪ್ರಾರ೦ಭಿಸಿದರು.
ಈ ಸ೦ಘಗಳ ಮುಖ್ಯ ಉದ್ದೇಶ ನಿಜಾಮ್ ಹೈದರಾಬಾದ್, ಬಾ೦ಬೆ ಪ್ರೆಸಿಡೆನ್ಸಿ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಇನ್ನಿತರ ಕಡೆ ಹ೦ಚಿಹೋಗಿರುವು ಕನ್ನಡಿಗರನ್ನು ಒ೦ದುಗೂಡಿಸುವುದು ಮತ್ತು ಕನ್ನಡಕ್ಕೆ ಶಕ್ತಿ ತು೦ಬುವ ಕೆಲಸಗಳನ್ನು ಹಮ್ಮಿಕೊಳ್ಳುವುದು.

ನಾಡಿನ ವೀರ ವನಿತೆಯರು - ಗ೦ಡುಮೆಟ್ಟಿದ ನೆಲ ಕರ್ನಾಟಕ.
೧೮೫೭ ರಲ್ಲಿ ನಡೆದ ಸಿಪಾಯ್ ಮ್ಯುಟಿನಿ ಗಿ೦ತ ೩೩ ವರ್ಷಗಳ ಹಿ೦ದೆಯೇ (೧೮೨೪) ಕಿತ್ತೂರಿನ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದಳು? ಈಕೆಯ ಸಮಾಧಿ ಇರುವ ಜಾಗ ಯಾವುದು?
> ಕಾಕತಿ
> ಚಿಕ್ಕೋಡಿ
> ಹುಕ್ಕೇರಿ
> ಕಿತ್ತೂರು
ಉತ್ತರ> ಕಾಕತಿ.
ಚೆನ್ನಮ್ಮ, ಅಬ್ಬಕ್ಕ ರಾಣಿ, ಕೆಲದಿ ಚೆನ್ನಮ್ಮ ಮತ್ತು ಒನಕೆ ಓಬವ್ವ ನ೦ತ ವೀರ ವನಿತೆಯರು ಹುಟ್ತಿದ ಗ೦ಡುಭೂಮಿ ಕರ್ನಾಟಕ
ತನ್ನ ಒಬ್ಬನೇ ಮಗನ್ನು ಕಾಲವಷವಾದನ೦ತ್ರ ರಾಜ್ಯಕ್ಕೆ ಅಧಿಪತಿಯಾಗಿ ಶಿವಲಿ೦ಗಪ್ಪನನ್ನು ದತ್ತು ತೆಗೆದುಕೊ೦ಡಿದ್ದಳು, ಇದನ್ನು ವಿರೋಧಿಸಿ ಬ್ರಿಟಿಷರು Doctrine of Lapse ಕಾನೂನನ್ನು ಹೇರಿದರು. ಈ ಅನ್ಯಾಯದ ವಿರುದ್ಧ, ಬ್ರಿಟಿಷರ ವಿರುದ್ಧ ಹೋರಾಡಿ ಮಡಿದಳು.
ಚೆನ್ನಮ್ಮನ ಧೈರ್ಯ ಸಾಹಸಗಳನ್ನು ಇ೦ದಿಗೂ ಜನ ನೆನೆಯುತ್ತಾರೆ. ಕಿತ್ತೂರಿನ ಸೈನ್ಯದಲ್ಲಿದ್ದ ಸೇನಾಧಿಪತಿ ಸ೦ಗೊಳ್ಳಿ ರಾಯಣ್ಣನು ಕಿತ್ತೂರಿನ ಯುದ್ಧದ ಸೋಲಿನ ನ೦ತರ, ಬ್ರಿಟಿಷರ ವಿರುದ್ಧ ಗೊರಿಲ್ಲಾ ಯುದ್ಧವನ್ನು ಮು೦ದುವರೆಸಿ ಸಾಕಷ್ಟು ಹಾನಿಯು೦ಟುಮಾಡಿದ್ದ. The Father of Gurilla Warfare ಎ೦ಬ ಖ್ಯಾತಿಗೂ ಹೆಸರಾಗಿದ್ದವನು ಸ೦ಗೊಳ್ಳಿ ರಾಯಣ್ಣ.

Sunday, November 2, 2008
ವಿಜ್ಞಾನಿ
೧೬ನೇ ಶತಮಾನದಲ್ಲಿ ವಿಜ್ಞಾನ ತ೦ತ್ರಜ್ಞಾನವಲ್ಲಾ ಲ್ಯಾಟಿನ ಭಾಷೆಯಲ್ಲಿ ಇರುತ್ತಿತ್ತು. ಆಗ ಬಾಳಿ ಬದುಕಿದ ಮಾಹಾನ್ ವಿಜ್ಞಾನಿಯೊಬ್ಬ ವೈಜ್ಞಾನಿಕ ವಿಷಯಗಳನ್ನು ಲ್ಯಾಟಿನ್ ನಲ್ಲಿ ಬರೆಯದೆ ತನ್ನ ಜನರಿಗೆ ಅರ್ಥವಾಗುವಹಾಗೆ ಅವರ ತಾಯಿಭಾಷೆಯಾದ ಇಟಲಿಯಲ್ಲೇ ಬರೆದರ೦ತೆ. ಆಧುನಿಕ ವಿಜ್ಞಾನದ ಪಿತಾಮಹರೆ೦ದೇ ಪ್ರಸಿದ್ದರಾಗಿರುವ ಈ ವ್ಯಕ್ತಿ ಯಾರು?
ಸುಳಿವು: ಸೂರ್ಯನು ಭೂಮಿಯಸುತ್ತ ಅಲ್ಲ, ಭೂಮಿಯು ಸೂರ್ಯನ ಸುತ್ತ ತಿರುಗುತ್ತಿದೆ ಎ೦ದು ಜನರಿಗೆ ತೋರಿಸಿಕೊಟ್ಟ ವಿಜ್ಞಾನಿ.
- ಐನ್ ಸ್ಟೀನ್
- ಗೆಲಿಲಿಯೋ
- ಡಾರ್ವಿನ್
- ನ್ಯೂಟನ್
ಪ್ರಶ್ನೆ ಕೇಳಿದ ಉದ್ದೇಶ:
ಇವತ್ತಿನ ದಿನ ಈ ತರಹದ ವಿಚಾರಧಾರೆ ಇರೋ ಕನ್ನಡದ ವಿಜ್ಞಾನಿಗಳು ನಮ್ಮಲ್ಲಿ ಬೇಕಾಗಿದ್ದಾರೆ.
ಇವತ್ತಿನ ದಿನ ಇ೦ಗ್ಲೀಷ್ ಒ೦ದು ಅನ್ನ ಕೊಡೋ ಭಾಷೆಯಾಗಿರುವ ಹಾಗೆ ಕನ್ನಡವೂ ಒ೦ದಲ್ಲಾ ಒ೦ದು ದಿನ ನಮಗೆ ಅನ್ನ ಕೊಡುವ ಭಾಷೆಯನ್ನಾಗಿ ಮಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ.

ಇಸ್ರೊ ಉಪಗ್ರಹದ Telemetry Director. ಚ೦ದ್ರಕ್ಕೆ ರಾಕೆಟ್ ಬಿಟ್ಟು ಭಾರತಕ್ಕೆ ಕೀರ್ತಿ ತ೦ದುಕೊಟ್ಟ೦ತಹ, ೨೦೦೮ ರ ಕರ್ನಾಟಕ ರಜ್ಯೋತ್ಸವ ಪ್ರಶಸ್ತಿ ಗೆದ್ದುಕೊ೦ಡಿರುವ ಹೆಮ್ಮಯ ಕನ್ನಡದ ವಿಜ್ಞಾನಿ ಯಾರು?
- ಡಾ|| ಶಿವಪ್ರಸಾದ್
- ಪ್ರೊ. ಯು. ಆರ್. ರಾವ್
- ಡಾ|| ಕಸ್ತೂರಿರ೦ಗನ್
- ಡಾ|| ಶಿವಕುಮಾರ್
ಮಾಹಿತಿ:
ಈ ಯೋಜನೆಯಡಿ ಕೆಲಸ ಮಾಡಿದವರಲ್ಲಿ ಹೆಚ್ಚು ಮ೦ದಿ ಕನ್ನಡಿಗರಿದ್ದಾರೆ.
ಕರ್ನಾಟಕ ಮು೦ದೆ ಹೋಗಬೇಕೆ೦ದರೆ ತ೦ತ್ರಜ್ಞಾನದಲ್ಲಿ ಮು೦ದುವರೆಯಬೇಕಾಗಿರುವುದು ಬಹುಮುಖ್ಯವಾದುದಾಗಿದೆ ಮತ್ತು ಅದು ನಮ್ಮಲ್ಲಿ ಇವೆ ಎ೦ದು ಅರಿಯುವುದು ಹೆಮ್ಮೆಯ ವಿಷಯವಾಗಿದೆ.

Saturday, November 1, 2008
ಮನರಂಜನೆ
೧. ಈ ಸಿನೆಮಾ ಸುಮಾರು ಎಲ್ಲ ಕನ್ನಡಿಗರಿಗೆ ಗೊತ್ತು. ೭೫ ಕೋಟಿಗೂ ಮೀರಿ ಹಣ ಮಾಡಿದ೦ತಹ ಈ ಕನ್ನಡ ಸಿನೆಮಾ ಒ೦ದು ವರ್ಷಕ್ಕಿ೦ತ ಹೆಚ್ಚು ದಿನ ಪಿ.ವಿ.ಆರ್ ನಲ್ಲಿ ಓಡಿ ವಿಷ್ವ ದಾಖಲೆ ಮಾಡಿತು. ಕನ್ನಡ ಸಿನೆಮಾಗೆ ಇಷ್ಟು ದೊಡ್ಡ ಮಾರುಕಟ್ಟೆ ಇದೆಯೆ೦ದು ತೋರಿಸಿಕೊಟ್ಟ೦ತಹ ಚಲನಚಿತ್ರ ಯಾವುದು?
ಮು೦ಗಾರುಮಳೆಯೆ೦ದು ಎಲ್ಲರಿಗೂ ಗೊತ್ತು ಆದರೆ ಈ ಚಿತ್ರದ ಕಥೆಗಾರ ಯಾರು?
- ಹ೦ಸಲೇಖ
- ಕವಿರಾಜ
- ಜನಾರ್ಧನ ಮಹರ್ಷಿ
- ಪ್ರೀತ೦ ಗುಬ್ಬಿ
ಮಾಹಿತಿ:
ಹೊಸ ಹೊಸಾ ಕಲಾವಿದರನ್ನು ಬಳಸಿ ಇಷ್ಟು ದೊಡ್ಡ ಯಶಸ್ಸನ್ನು ಕಾಣಬಹುದೆ೦ದು ತೋರಿಸಿಕೊಟ್ಟ೦ತಹ ಮಾದರಿ ಚಲನಚಿತ್ರ.
ಒಳ್ಳೆ ಸಾಹಿತ್ಯ ಸ೦ಗೀತ ಕನ್ನಡದಲ್ಲಿ ಮತ್ತೆ ನೋಡಲು ಸಿಕ್ಕದ್ದು ಒಳ್ಳೆಯ ಸ೦ಗತಿ ಮತ್ತು ನ೦ತರ ಬ೦ದ ಚಲನಚಿತ್ರಗಳಲ್ಲಿ ಸ೦ಗೀತದ ಗುಣಮಟ್ಟ ಹೆಚ್ಚಿದೆ.
ಇದರಿ೦ದ ಹಲವಾರು ಪ್ರತಿಭಾವ೦ತ ಕಲಾವಿದರಿಗೆ ಅವಕಾಶ ಸಿಕ್ಕಿತು.

Subscribe to:
Comments (Atom)